Tuesday, May 22, 2012

ಇಂಡಿಯನ್‌ ಪ್ರಾಂಬ್ಲ್‌‌ ಲೀಗ್‌‌


ಇಂಡಿಯನ್‌‌ ಪ್ರಿಮೀಯರ್‌‌ ಲೀಗ್‌‌ನ ಐದನೇ ಆವೃತ್ತಿ ಸರಳವಾಗಿ ಕೊನೆಗೊಳ್ಳುವಂತೆ ಕಾಣುತ್ತಿಲ್ಲ. ಪಂದ್ಯಾವಳಿ ಮುಗಿಯಲು ದಿನಗಣನೆ ಆರಂಭವಾದ ಬೆನ್ನಲೆ ವಿವಾದಗಳು ಹೆಚ್ಚಾಗಿ ಸುತ್ತಿಕೊಳ್ಳುತ್ತಿವೆ. ಇನ್ನೇನೂ ಒಂದು ಹಗರಣ ಬಗೆ ಹರೆಯಿತು ಎಂದು ನಿಟ್ಟಿಸಿರುವ ಬಿಡುವ ಮೊದಲೆ, ಇನ್ನೊಂದು ಹಗರಣ ಐಪಿಎಲ್‌ನ ಉಸಿರುಗಟ್ಟಿಸುತ್ತುದೆ. ಹೀಗಾಗಿ ಇಂದಿನ ದಿನಗಳಲ್ಲಿ ಐಪಿಎಲ್‌ ತನ್ನ ಹೆಸರನ್ನು ಬದಲಿಸಿದಂತೆ ಕಾಣಿಸುತ್ತದೆ. ಇಂಡಿಯನ್‌‌ ಪ್ರಿಮೀಯರ್‌‌ ಲೀಗ್‌‌ ಈಗ ಇಂಡಿಯನ್‌ ಪ್ರಾಂಬ್ಲ್‌‌ ಲೀಗ್‌‌ ಆಗುತ್ತಿದೆ.
ಆಟಗಾರರು, ಪ್ರಾಂಚೈಸಿಗಳು ಸರಳವಾಗಿ ಬಂದು ಪಂದ್ಯಾವಳಿಗಳನ್ನು ಸುಸೂತ್ರವಾಗಿ ಆಡಿದ್ದರೆ ಐಪಿಎಲ್‌ ಅದ್ದೂರಿ ತೆರೆ ಕಂಡುಕೊಳ್ಳುತ್ತಿತ್ತು. ಆದರೆ ಆಟಗಾರರ ಸ್ಪಾಟ್‌‌ ಫಿಕ್ಸಿಂಗ್‌‌, ಪ್ರಾಂಚೈಸಿಗಳ ಹಾಗೂ ಆಟಗಾರ ನಡುವಳಿಕೆಯಿಂದ ಐಪಿಎಲ್‌‌ಗೆ ಕಳಂಕ ತಟ್ಟಿದೆ.
ಐಪಿಎಲ್‌‌ನಲ್ಲಿ ಆಟಗಾರರ ಸ್ಪಾಟ್‌‌ ಫಿಕ್ಸಿಂಗ್‌‌ಗೆ ಇತಿ ಶ್ರೀ ಹಾಡಿದ ಐಪಿಎಲ್‌ಗೆ, ಬಾದಶಾರ ನಡುವಳಿಕೆ ಮುಳುವಾಗಿ ಪರಿಣಮಿಸಿದೆ. ಅಲ್ಲದೆ ಇದರಿಂದ ಎಂಸಿಎ ಹಾಗೂ ಬಿಸಿಸಿಐ ನಡುವಣ ವೈ ಮನಸ್ಸಿಗೂ ಈ ಪ್ರಕರಣ ಕಾರಣವಾಗಿದೆ. ಇದರ ಬೆನ್ನಲ್ಲೆ ಆರ್‌‌ಸಿಬಿ ಆಟಗಾರ ಲೂಕ್ ಪೊಮರ್ ರೇಪ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದಾರೆ. ಇದರಿಂದ ಆಟಗಾರರ ನಡುವಳಿಕೆ ಕೆಲವರಿಗೆ ಬೆಸರ ಮೂಡಿಸಿದೆ. ಇದರ ಬೆನ್ನಲೆ ನಿನ್ನೆ ರಾತ್ರಿ ರೇವ್‌‌ ಪಾರ್ಟಿಯಲ್ಲಿ ಐಪಿಎಲ್‌ ಆಟಗಾರರು ಇದ್ದರು ಎಂದು ಶಂಕಿಸಲಾಗಿದೆ. ಇದರಿಂದ ಬರಿ ಕ್ರಿಡಾಂಗಣದಲ್ಲಿ ಮಾತರ್ರ ಹೆಸರು ಮಾಡುತ್ತಿದ್ದ ಆಟಗಾರರು ಈಗ ಕ್ರಿಡಾಂಗಣದ ಹೊರಗು ಹೆಸರು ಮಾಡುತ್ತಿದ್ದಾರೆ.
ಐಪಿಎಲ್‌ ಸಂಸ್ಥೆ ಅಂತೂ ಎಲ್ಲ ವಿವಾದಗಳಿಗೆ ತೆರೆಯೆಳೆಯುತ್ತಾ ಸಾಗಿದೆ. ಮುಂದಿನ ದಿನಗಳಲ್ಲಿ ಈ ವಿವಾದಗಳು ಹೇಗೆ ಐಪಿಎಲ್‌‌ ಹಾಗೂ ಆಟಗಾರರಿಗೆ ಮುಳುವಾಗಿ ಕಾಡುತ್ತವೆ ಎಂಬುದನ್ನು ಕಾದು ನೋಡಬೇಕು.

Sunday, May 20, 2012

ಆರ್‌‌ಸಿಬಿ ಫ್ಲೇ-ಆಫ್‌‌ ಕನಸು ಭಗ್ನ



ಕ್ರೀಸ್‌‌ನಲ್ಲಿ ನೆಲಕಚ್ಚದ ಗೇಲ್‌‌ನಿಂದ ಆರ್‌‌ಸಿಬಿ ಫ್ಲೇ-ಆಫ್‌‌ ಕನಸು ಭಗ್ನವಾಗಿದೆ. ಇದರಿಂದ ಭಾರತದ ಲಕ್ಕಿಯಷ್ಟ ಕ್ಯಾಪಟ್ನ್‌‌ ಧೋನಿ ಬಳಗಕ್ಕೆ ಫ್ಲೇ-ಆಫ್‌‌‌ನಲ್ಲಿ  ಸ್ಥಾನ ಸಿಕ್ಕಿದೆ. ಹೀಗಾಗಿ ಧೋನಿ ನಾಯಕತ್ವದ ಚೆನ್ನೈಗೆ ಮತ್ತೋಂದು ಬಾರಿ ಕಪ್‌‌ ಎತ್ತುವ ಆಸೆ ಮುಡಿದೆ. ಕಳೆದು ನಾಲ್ಕು ದಿನಗಳಿಂದ ನಿದ್ದಿಯ ಮಪ್ಪಿನಲ್ಲೂ ಚೆನ್ನೈ ಆರ್‌‌ಸಿಬಿ ಪಂದ್ಯವನ್ನೇ ಕಾದು ನೋಡಿತ್ತು. ಇದರಿಂದ ಧೋನಿ ಮತ್ತೆ ಕಪ್‌‌ ಎತ್ತುವ ಕನಸು ಜೀವಂತವಾಗಿಸಿದೆ. 





Sunday, April 8, 2012

ಭಾರತದ ಕ್ರಿಕೇಟ್‌‌ನ ರತ್ನ














ಕ್ಯಾನ್ಸರ್‌‌ ಗೆದ್ದ ರಾಜನಿಗೆ ಸ್ವಾಗತ

ಮೂರು ತಿಂಗಳ ನಂತರ ಅಭಿಮಾನಿಗಳಿಗೆ ದರ್ಶನ

ಕ್ಯಾನ್ಸರ್‌‌‌ ರೋಗಿಗಳಿಗೆ ಸ್ಪೂರ್ತಿಯ ಸೆಲೆ ಈ ಸರ್ದಾರ

ಇವನೇ ಭಾರತದ ಕ್ರಿಕೇಟ್‌‌ನ ರತ್ನ ಯುವರಾಜ

Monday, April 2, 2012

ಕಪ್‌‌ ಎತ್ತಿ ಒಂದು ವರ್ಷ

ಇದು ಮರೆತರು ಮರೆಯಲಾಗದ ದಿನ. ಭಾರತ ವಿಶ್ವ ಕಪ್‌‌ ಗೆದ್ದು ಇಂದಿಗೆ ಒಂದು ವರ್ಷ ಸಂದಿದೆ. ಕಳೆದ ವರ್ಷ ಈ ಹೊತ್ತಿಗೆ ದೇಶದ ಜನ ರಸ್ತೆ ಯಲ್ಲಿ ಕುಣಿದಾಡಿ ಸಂಭ್ರಮ ಪಟ್ಟಿದ್ದು ಇನ್ನೂ ನೆನಪಿನಿಂದ ಮಾಸಿಲ್ಲ. ಅಷ್ಟೋತ್ತಿಗಾಗಲೇ ಒಂದು ವರ್ಷವಾಗಿದೆ. ಒಂದು ವರ್ಷ ಎಷ್ಟು ಬೇಗ ಹೋಯಿತು. ಹೀಗೆ ಹೋದ ವರ್ಷ ಮುಷ್ಠಿಯಷ್ಟು ಸಂತಸವನ್ನು ತಂದಿತ್ತು. ಬೊಗಸೆಯಷ್ಟು ನೆನಪುಗಳನ್ನು ಬಿಚಿಟ್ಟಿತ್ತು. ಕೊಂಚ ನೋವನ್ನು ಮರೆಯಾಗದಂತೆ ಮಾಡಿತ್ತು. ಈ ದಿನ ಕಳೆದ ವರ್ಷ ಭಾರತಿಯ್ರಿಗೆ ಲಂಕಾದಹನದ ಖುಷಿ, ಇನ್ನೋಂದೆಡೆ ಕನಸ್ಸನ್ನು ನನಸಾಗಿಸಿದ ಅನುಭವ. ಆ ದಿನ ರಾತ್ರಿ ಭಾರತದ ನಾಯಕ ಹೊಡೆದ ಶಾಟ್‌‌, ಕಪ್‌‌ ಎತ್ತಿದ ಭಂಗಿ ಕ್ರಿಕೇಟ್‌‌ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಆ ಒಂದು ವರ್ಷದ ನಡುವೇಯೆ ಭಾರತ ಆಡಿದ ರೀತಿ ನೋಡಿದರೆ ಅಚ್ಚರಿಯಾಗುತ್ತದೆ. ಒಂದು ವರ್ಷದ ಹಿಂದೆ ಇದ್ದ ಸಂಭ್ರಮ ವರ್ಷದ ನಡುವೇ ಇಲ್ಲ. ಆದರು ಏಕತೆಯನಾಡಿನಲ್ಲಿಜನ ಹಳೆಯ ಕೆಲವುಕಹಿ ಘಟನೆಗಳನ್ನು ಮರೆತು,ಮತ್ತೆ ಸಂಭ್ರಮಾಚ್ರಣೆಯಲ್ಲಿ ತೊಡಗಿದ್ದಾರೆ. ಒಂದು ವರ್ಷ ತಂಡ ತೋರಿದ ಪ್ರದರ್ಶನ ಪರಿಗಣಿಸದೆ, ೨೮ ವರ್ಷಗಳಿಂದ ಮಾಡಲಾಗದ ಸಾಧನೆಯನ್ನು ಮಾಡಿದ ತಂಡದ ವರ್ಷಾಚರಣೆಯಲ್ಲಿ ಭಾರತಿಯರು ಮಘ್ನ್ರಾಗಿದ್ದಾರೆ.

Saturday, March 17, 2012

ಸಚಿನ್‌ ಶತಕಗಳ ವೀರ



ಸಚಿನ್‌‌ ಹೆಸರು ಕೇಳಿದರೆ ಸಾಕು ಕ್ರಿಕೇಟ್‌‌ ಎಂಬ ಶಬ್ದ ಬರುತ್ತದೆ. ಅಷ್ಟು ಹೆಸರುವಾಸಿ ಸಚಿನ್‌‌. ತಾವು ಪಟ್ಟ ಕಠಿಣ ಶ್ರಮದಿಂದ ಇಂದು ಅವರು ವಿಶ್ವದ ಗಮನ ಸೆಳೆದರು. ನಮ್ಮ ದೇಶದ ಕ್ರೀಡೆ ಅಲ್ಲದ ಕ್ರಿಕೇಟ್‌‌ನ್ನು ಬಲುವಾಗಿ ಪ್ರೀತಿಸಿ ಅಪ್ಪಿಕೊಂಡವರು ಸಚಿನ್‌. ಸಚಿನ್‌‌ ತಮ್ಮ ಹೆಸರಿನಲ್ಲಿ ಅದೆಷ್ಟು ದಾಖಲೆಗಳನ್ನು ನಿರ್ಮಿಸಿದ್ದಾರೆ. ಆದರೂ ಅವರ ಈ ದಾಖಲೆ ಮಾತ್ರ ಕ್ರಿಕೇಟ್‌‌ ವಿಶ್ವದ ಗಮನವನ್ನು ತನ್ನತ್ತ ಸೇಳೆಯುವಂತೆ ಮಡಿತ್ತು. ಸಚಿನ್‌‌ ಎಲ್ಲದರಲ್ಲಿಯೂ ಫೇಮಸ್‌‌ ಅದು ಶೂನ್ಯ ಸುತ್ತುವದರಿಂದ ಹಿಡಿದ ಶತಕ ಸಿಡಿಸುದವದವರೆಗೆ. ಅಭಿಮಾನಿಗಳ ಕಾತುರದಿಂದಕಾದು ನೋಡುತ್ತಿದ್ದ ನೂರನೇ ಶತಕವನ್ನು ಸಚಿನ್‌ ಬಾಂಗ್ಲಾ ವಿರುದ್ಧ ಹೋಡೆದರು. ಇದು ಕ್ರಿಕೇಟ್‌‌ ಇತಿಹಾಸದಲ್ಲಿ ಅತಿ ದೊಡ್ಡ ಮೈಲುಗಲ್ಲೂ. ಇವರ ಈ ಸಾಧನೆಗೆ ಅಪಾರ ಶ್ಲಾಘನೆಕೇಳಿ ಬಂದವು. ಆದರೆ ಶತಕಗಳ ಶತಕದಲ್ಲೂ ಸಚಿನನ್ನು ಬೆಂಬಿಡದೆ ಕಾಡಿದ್ದು ಕನಸು. ಕನಸು ಕಂಡು ಇಡೇರಿಸುವ ಪರಿಯನ್ನು ಕಿರಿಯ ಆಟಗಾರ್ರಿಗೆ ಹೇಳಿದರು.ಟೆಸ್ಟ್‌‌‌ ಆಡುವ ಎಲ್ಲ ದೇಶಗಳ ಜೊತೆಗೆಶತಕ ಬಾರಿಸಿದ ಪ್ರಥಮ ತೆಂಡುಲ್ಕರ್‌‌. ಅವರ ಈ ಸಾಧನೆಗೆ ಅದೆಷ್ಟುಮೈದಾನಗಳು ತಾ ಮುಂದೆ ನಾಮುಂದೆ ಎಂದು ಕಾಯುತ್ತಿದ್ದವು.ಆದರೆ ಸಚಿನ್‌ ಬ್ಯಾಟ್‌‌ ಅಬ್ಬ್ರಿಸಿದ್ದು ಮಾತ್ರ ಬಾಂಗ್ಲಾದಲ್ಲಿ. ಶತಕಗಳ ಶತಕವನ್ನು ನೋಡಲು ಅದೆಷ್ಟೋಅಭಿಮಾನಿಗಳು ಉಟ, ನಿದ್ದ, ಕೆಲಸ ಬಿಟ್ಟುಕುಳಿತ್ತಿದ್ದರು. ಆದರೆ ಏಷ್ಯಾ ಕಪ್‌ನಲ್ಲಿ ಮಾತ್ರ ನಿರಾಸೆ ಮಾಡಲಿಲ್ಲ.ತಮ್ಮ ಶತಕಗಳ ಸರಮಾಲೆಗೆ 100 ಶತಕದ ಮುತ್ತುಗಳನ್ನುಪೊಣಿಸಿದರು. ಕಟು ನಿಷ್ಟೆಯಿಂದ ಕಲಿತ ಪಾಠದಲ್ಲಿ ಈಗ ಅವರೆ ಮಾಸ್ಟರ್‌‌. ನಮ್ಮದಲ್ಲದ ಆಟದಲ್ಲೂ ಅವರೆ ಚಾಂಪಿಯನ್‌‌. ಅಭಿಮಾನಿಗಳಿಗೆ ಕ್ರಿಕೇಟ್‌‌ನ ದೇವರು ಈ ಲಿಟ್ಲಲ್‌‌‌ ಮಾಸ್ಟರ್‌‌. ಚಿಕ್ಕಂದಿನಿಂದ ಇಂದಿನವರೆಗೂ ಅವರ ಕೈಯಲ್ಲಿರೋದೆ ಮಂತ್ರದಂಡ. ಟೀಕಾ ಕಾರರು ಎದಕ್ಕು ಹೆದರೆದೆ ಇದ್ದರೂ ಈ ಬ್ಯಾಟ್‌‌ಗೆ ಹೆದರಲೇ ಬೇಕು. ವಾಮನ ಮೂರ್ತಿಯ ತನ್ನ ವಿಶ್ವ ರೂಪ ತೊರಿಸಿಯೇ ಬಿಡುತ್ತಾರೆ.ಇವರ ಈ ಸಾಧನೆ ಅಭಿಮಾನಿಗಳ ಮನದಿಂದ ಅಳಿಸಲು ಇನ್ನೂ ಒಂದು ನೂರು ವರ್ಷವಾದರೂ ಬೇಕು.

Thursday, February 16, 2012

ಏನು ಸೌಂಡು, ಏನು ಬೇಂಕಿ..................



ಏರ್‌‌ ಜೇಟ್‌‌ ಹೆಲಿಕ್ಯಾಪ್ಟ್ರ್‌‌ ನೇಲದಲ್ಲಿ ಓಡುತ್ತದೆ ಎಂಧರೆ ನಂಬುತ್ತಿರಾ. ನಂಬಲೇ ಬೇಕು. ಹೆಲಿಕ್ಯಾಪ್ಟ್ರ್‌‌‌ ಎಂಜಿನ್‌‌ ಬಳಿಸಿ ಟೂ ವಿಲರ್‌‌ ರೆಡಿ ಮಾಡಿದ ಹೆಗ್ಗಳಿಕೆ, ಓರ್ಲಾಂಡ್‌‌ ದೇಶದ ಟೋನಿ ಪ್ಯಾಂಡಲೋಪೊಗೆ ಸಲ್ಲುತ್ತದೆ. ಸುಜಕಿ ಹೈಬುಜಾವನ್ನು ಮೋಡಿಫೈ ಮಾಡಿ, ವಾಹನಕ್ಕೆ ಹೆಲಿಕ್ಯಾಪ್ಟ್ರ್‌‌‌ ಎಂಜಿನ್‌‌ ಬಳಿಸಿದ್ದಾರೆ. ಟೋನಿ ಇಂತಹ ಆವಿಷ್ಕಾರ ಮಾಡಿರುವದು ಇದೇ ಮೋದಲಲ್ಲ. ಈ ಮೋದಲು ಅವರು ಅತಿ ಬೇಗವಾಗಿ ಚಲಿಸುವ ರೇಸ್‌‌ ಬೋಟ್‌‌‌ನ್ನು ತಯಾರಿಸಿದ್ದರು. ಈ ಬೈಕ್‌‌ನ್ನು ಓಡಿಸಲು ಪರಿಣಿತರು ಬೇಕಿಲ್ಲ. ಸಾಧರಣ ಗಾಡಿ ಓಡಿಸಬಲ್ಲ ಬೈಕ್‌‌ ಸವಾರ ಈ ಬೈಕ್‌‌ ಓಡಿಸಬಹುದು. ಬಹುದಿನಗಳ ಶ್ರಮ ಈಗ ಫಲಿಸಿದೆ. ಈ ಬೈಕ್‌ ವಿಷೇಶತೆ ಬೈಕ್‌‌ ಇದರ ಸೌಂಡ್‌. ಈ ಬೈಕ್‌‌ ಮೈಲೇಜ್‌‌‌ ಐದು ಕಿಲೋ ಮಿಟರ್‌. ಟೋನಿ ಹೇಳುವ ಪ್ರಕಾರ್‌‌‌ ಬಿಕನೀ ಶೋ ನಡೆದಲ್ಲಿ ಈ ಗಾಡಿ ತೆಗೆದುಕೊಂಡು ಹೋದರೆ ಎಲ್ಲರು ಈ ಬೈಕ್‌‌ ಸೌಂಡನಿಂದಲೇ ಚಕಿತರಾಗಿ ನೋಡುತ್ತಾರೆ. ಈ ಬೈಕ್‌‌ ಏರ್‌‌ ಜೇಟ್‌‌‌‌ರೀತಿಯಲ್ಲಿ ಬೇಂಕಿ ಉಗುಳುತ್ತದೆ. ಅಂದಹಾಗೆ ಟೋನಿ ತನ್ನ ಹೋಸ್‌‌ ಬೈಕ್‌ನ್ನು ಮಾರಾಲು ಹೋರಟಿದ್ದಾರೆ. ಈ ಬೈಕ್‌‌ನ ಬೇಲೆ ಬರೋಬರಿ 1 ಲಕ್ಷ ಡಾಲರ್‌‌‌.